01 July 2025 | Join group

ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ 'ಬೃಹತ್ ಪ್ರತಿಭಟನಾ' ಕಾರ್ಯಕ್ರಮ: ಸಿದ್ಧವಾದ ಪ್ರತಿಭಟನೆಯ ಕಾರ್ಯಸೂಚಿ

  • 21 Jun 2025 05:09:07 PM

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲದ ವತಿಯಿಂದ ರಾಜ್ಯ ಸರಕಾರದ ದುರಾಡಳಿತ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಜೂನ್ 23, 2025 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಗಳ ಮುಂಭಾಗ ಈ ಪ್ರತಿಭಟನಾ ಕಾರ್ಯಕ್ರಮ ನಡೆಸುವುದಾಗಿ ತಿಳಿಸಲಾಗಿದೆ.

 

ಯಾವೆಲ್ಲಾ ವಿಷಯದ ಬಗ್ಗೆ ಈ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ?

 

9/11 ನಿವೇಶಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ

ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ

ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಒತ್ತಾಯಿಸಿ

ವೃದ್ಧಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಒತ್ತಾಯಿಸಿ

ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವುದನ್ನು ವಿರೋಧಿಸಿ

ವಿದ್ಯುತ್ ದರ ಏರಿಕೆಯನ್ನು ಖಂಡಿಸಿ

ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು ಹಾಗೂ ಕೆಂಪುಕಲ್ಲು ಸಾಗಾಣಿಕೆ ನಿರ್ಬಂಧ ರದ್ದತಿಗೆ ಆಗ್ರಹಿಸಿ

 

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆಯಲಿರುವ ಪ್ರತಿಭಟನೆಗೆ ಬಿಜೆಪಿಯ ಎಲ್ಲಾ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರ ಸಹಿತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.