01 July 2025 | Join group

SCI ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ತೇವು ತಾರಾನಾಥ ಕೊಟ್ಟಾರಿ ಆಯ್ಕೆ

  • 27 Jun 2025 01:53:35 PM

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ತೇವು ತಾರಾನಾಥ ಕೊಟ್ಟಾರಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚುನಾವಣಾ ಅಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಆನಂದ ಬಂಜನ್ ಪ್ರಕಟಿಸಿದ್ದಾರೆ.

 

ಹಿರಿಯ ಜೇಸಿಗಳಾದ ಪಿ. ಮಹಮ್ಮದ್ (ಆಡಳಿತ), ಸಂದೀಪ್ ಸಾಲ್ಯಾನ್ (ಸಾರ್ವಜನಿಕ ಸಂಪರ್ಕ), ಮಹೇಶ ನಿಟಿಲಾಪುರ(ವ್ಯಕ್ತಿ ವಿಕಸನ) ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಬಂಗೇರ, ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಪಿಪಿಎಫ್ ಜಯಾನಂದ ಪೆರಾಜೆ, ಮಾಜಿ ಅಧ್ಯಕ್ಷ ಡಾ. ಆನಂದ ಬಂಜನ್ ನಿಯುಕ್ತಗೊಂಡಿದ್ದಾರೆ. ಒಟ್ಟು 14 ವಿವಿಧ ಪದಾಧಿಕಾರಿಗಳು ಕೂಡ ನೇಮಕವಾಗಿರುವ ಬಗ್ಗೆ ವರದಿಯಾಗಿದೆ.

 

ಪದಗ್ರಹಣ ಸಮಾರಂಭವು ಜೂನ್ 29 ರಂದು ಬೆಳಿಗ್ಗೆ 10 ಗಂಟೆಗೆ ಬಿಸಿ ರೋಡಿನ ಅಕ್ಷಯ ಸಭಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ. ಆದಿರಾಜ ಜೈನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.