ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿತ ವಿಷಯಗಳನ್ನು ಅಧ್ಯಯನ ಮಾಡಲು 1995 ರಂದು ಸ್ಥಾಪನೆಯಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೇಮಕ ವಿಳಂಬವಾದರೂ ರಾಜ್ಯ ಸರಕಾರ ಐದು ಜನರ ಸದಸ್ಯರುಗಳನ್ನು ಹೊಂದಿದ ನಿಯೋಗವನ್ನು ರಚಿಸಿದ್ದು, ದಕ್ಷಿಣ ಕನ್ನಡದಿಂದ ಮಂಗಳೂರಿನ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ನಿಯೋಗದ ಸದಸ್ಯರುಗಳು ಇನ್ನು ಮೂರು ವರ್ಷ ಸಕ್ರಿಯ ಸದಸ್ಯರುಗಳಾಗಿ ಉಳಿಯಲಿದ್ದಾರೆ. ಪ್ರತಿಭಾ ಕುಳಾಯಿಯವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.