ಬೆಂಗಳೂರು: ತುಳುನಾಡು ಜವನೆರ್ ಬೆಂಗಳೂರು (ರಿ) ತಂಡದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಜೂನ್ 29ರ ಭಾನುವಾರ ನಡೆಯಿತು. ಬೆಂಗಳೂರಿನಲ್ಲಿ ನೆಲೆಸಿರುವ ತುಳುವರನ್ನು ಒಗ್ಗೂಡಿಸುವ ತುಳುನಾಡು ಜವನೆರ್ ಬೆಂಗಳೂರು ಸಂಘಟನೆಯು ಪ್ರತಿ ವರ್ಷ ಅದ್ದೂರಿಯಾಗಿ 'ಅಸ್ಟೆಮಿದ ಐಸಿರ' ಕಾರ್ಯಕ್ರಮವನ್ನು ನಡೆಸುಕೊಂಡು ಬಂದಿದೆ.
ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಮುಂದಿನ ಯೋಜನೆಗಳ ತಯಾರಿ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ಈ ವರ್ಷದ 'ಅಸ್ಟೆಮಿದ ಐಸಿರ' ಪ್ರತಿ ವರ್ಷದಂತೆ ಸೆಪ್ಟೆಂಬರ್ ತಿಂಗಳಲ್ಲಿ ನೆರವೇರಲಿದ್ದು, ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಇಡೀ ದಿನದ ಕಾರ್ಯಕ್ರಮಗಳು ನಡೆಯಲಿವೆ.
2025-26ನೇ ಸಾಲಿನ ಪದಾಧಿಕಾರಿಗಳ ವಿವರ ಈ ರೀತಿ ಇದೆ:
ಅಧ್ಯಕ್ಷರು: ಹರಿಪ್ರಸಾದ್ ಬೇಂಗದಡಿ
ಕಾರ್ಯದರ್ಶಿ: ಹಿತಕರ್ ಮುಂಡ್ಕೂರು
ಉಪಾಧ್ಯಕ್ಷರು: ಅಶೋಕ್ ಶಾಂತಿಗುಡ್ಡೆ
ಕೋಶಾಧಿಕಾರಿ: ಶ್ರೀಪ್ರಸಾದ್
ಜತೆ ಕಾರ್ಯದರ್ಶಿ: ಸುನಿಲ್ ಕೊಡಗು,
ಕ್ರೀಡಾಸಮಿತಿ: ರಾಕೇಶ್ ಮೂಡಬಿದ್ರೆ ಮತ್ತು ತ್ರಿಶಾನ್ ಕುಡ್ಲ
ಸಾಂಸ್ಕೃತಿಕ ಸಮಿತಿ: ಅಜಿತ್ ಕಾಪು ಮತ್ತು ಧನುಷ್ ಕಾರ್ಕಳ
ಪ್ರಚಾರ ಮಾಧ್ಯಮ: ಕಾರ್ತಿಕ್ ಕಲ್ಲಡ್ಕ ಮತ್ತು ಅವಿನಾಶ್ ಕಡೇಶಿವಾಲಯ.
ಸೆಪ್ಟೆಂಬರ್ ಮೊದಲೆರಡು ವಾರದಲ್ಲಿ ಭವ್ಯವಾದ ಕಾರ್ಯಕ್ರಮ ನಡೆಯಲಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ. ತದನಂತರ ಕಾರ್ಯಕ್ರಮದ ತಯಾರಿಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.