ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟ(ರಿ.)ದ ನೇತೃತ್ವದಲ್ಲಿ ಕೆಂಪು ಕಲ್ಲು ಹಾಗೂ ಕೆಂಪು ಕಲ್ಲು ಸಾಗಾಟದ ಮೇಲೆ ಕಠಿಣ ಕಾನೂನು ಮತ್ತು ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿರಾಜ್ಯ ಸರಕಾರದ ವಿರುದ್ಧ 'ಬೃಹತ್ ಪ್ರತಿಭಟನೆ'ಯನ್ನು ಆಯೋಜಿಸಲಾಗಿದೆ.
ನಾಳೆ ಜುಲೈ 03 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್(Clock Tower) ಬಳಿ ಈ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಕೆಂಪು ಕಲ್ಲನ್ನು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಅವಲಂಬಿಸಿದ್ದೀರಾ, ಆದ್ದರಿಂದ ದಯವಿಟ್ಟು ನಮ್ಮೊಡನೆ ಜೊತೆಗೂಡಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟ(ರಿ.) ನಾಗರಿಕರಲ್ಲಿ ವಿನಂತಿಯನ್ನು ಮಾಡಿದೆ.