ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ತನ್ನ ಮೂರನೇ ವರ್ಷದ ಪಿಲಿಗೊಬ್ಬು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡರು. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಇದರ ದೇವಮಾರು ಗದ್ದೆಯಲ್ಲಿ ಪಿಲಿಗೊಬ್ಬು - 2025, ಸೀಸನ್ 3 ಕಾರ್ಯಕ್ರಮವು ಈ ವರ್ಷವೂ ಬಹಳ ಅದ್ದೂರಿಯಿಂದ ನಡೆಯಲಿದೆ.
ಈ ಸಂಸ್ಥೆಯ ಸ್ಥಾಪನಾಧ್ಯಕ್ಷರಾದ ಸಹಜ್ ರೈ ಬಳಜ್ಜ ಇವರ ಅಧ್ಯಕ್ಷತೆಯಲ್ಲಿ ದರ್ಬೆಯ ಶ್ರೀ ರಾಮ ಸೌಧದಲ್ಲಿ ಪೂರ್ವಭಾವಿ ಸಭೆ ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಸಮ್ಮುಖದಲ್ಲಿ ನಡೆಸಲಾಯಿತು. ಸೆಪ್ಟೆಂಬರ್ 27 ಮತ್ತು 28 ರಂದು ಎರಡು ದಿವಸದ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ಧರಿಸಲಾಗಿದೆ.
ಸೆ.27 ರಂದು ಫುಡ್ ಪೇಸ್ಟ್ ಗೆ ಚಾಲನೆ ನೀಡಿ, ನಂತರ ಸೆ.28 ರಂದು ಪಿಲಿಗೊಬ್ಬು 2025 ಸೀಸನ್ - 3 ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ರೂಪುರೇಷೆ ಕುರಿತು ಮೀಟಿಂಗ್ ನಲ್ಲಿ ಚರ್ಚಿಸಲಾಯಿತು.
ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಈಶಾನ್ಯ, ಸಂಚಾಲಕರಾದ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷರಾದ ಶ್ರೀ ಸುಜಿತ್ ರಾಯ್ ಪಾಲ್ತಾಡ್ ಹಾಗೂ ಎಲ್ಲಾ ಸದಸ್ಯರುಗಳ ಸಮ್ಮುಖದಲ್ಲಿ ಈ ಸಭೆಯನ್ನು ನಡೆಸಲಾಯಿತು.