ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪ್ರತಿಷ್ಠಾನದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಲಾದ ಗುರುವಂದನಾ ಮತ್ತು ಶ್ರೀ ನಾರಾಯಣಗುರುಗಳ ಕೃತಿ ‘ಆತ್ಮೋಪದೇಶ ಶತಕಂ’ ಕನ್ನಡಾನುವಾದ 'ಶ್ರೀ ಗುರು ಸದ್ದರ್ಶನ' ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
'ಶ್ರೀ ನಾರಾಯಣ ದಿವ್ಯಪ್ರಭೇದ ಅಧ್ಯಯನ ಅಭಿಯಾನ ಕನ್ನಡ ಭಾಷೆಯಲ್ಲಿ ಕುದ್ರೋಳಿಯಲ್ಲೂ ನಡೆಯಬೇಕು, ಈ ಮೂಲಕ ಇಲ್ಲೂ ಶ್ರೀಗುರುಗಳ ಪೂರ್ಣ ಅಧ್ಯಯನ ಆಗಬೇಕು' ಎಂದು ಉಪಸ್ಥಿತರಿದ್ದ ಕೇರಳ ವರ್ಕಳ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು.
ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ, ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ, ಕೇರಳ ವರ್ಕಳ ಶಿವಗಿರಿ ಮಠದ ಮಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂನ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್, ಕುದ್ರೋಳಿ ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಜೈರಾಜ್, ಭಾರತ್ ಬ್ಯಾಂಕ್ ಚೇರ್‌ಮನ್ ಸೂರ್ಯಕಾಂತ್ ಜಯ ಸುವರ್ಣ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ, ಮೊದಲಾದವರು ಉಪಸ್ಥಿತರಿದ್ದರು.