ಬಂಟ್ವಾಳ, ಕಡೇಶಿವಾಲಯ: ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ನೇತೃತ್ವದಲ್ಲಿ ಯಶ್ವಸಿ 5ನೇ ವರ್ಷದ ಕೃಷಿ ಚಟುವಟಿಕೆ 'ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ' ಕಾರ್ಯಕ್ರಮ ಇದೇ ಬರುವ ದಿನಾಂಕ ಆಗಸ್ಟ್ 03, 2025ರ ಆದಿತ್ಯವಾರ ಕಡೇಶಿವಾಲಯ ಗ್ರಾಮದ ಪುಣ್ಕೆದಡಿ ಗದ್ದೆಯಲ್ಲಿ ನೆರವೇರಲಿದೆ.
ಮುಂಗಾರು ಮಳೆಯ ಅಬ್ಬರದ ಮಳೆ ನೀರಿನ ಹನಿಗಳೊಂದಿಗೆ, ಭೂಮಿತಾಯಿಯ ಮಡಿಲಲ್ಲಿ ಪ್ರಕೃತಿಮಾತೆಯ ನೆರಳಿನಲ್ಲಿ 'ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ' ಎಂಬ ಘೋಷವಾಕ್ಯದೊಂದಿಗೆ ವ್ಯವಸಾಯದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಬಿಲ್ಲವ ಬಾಂಧವರಿಗೆ 'ಕೆಸರ್ದ ಕಂಡೋಡು ಕುಸಲ್ದ ಗೊಬ್ಬು' ಎನ್ನುವ ಆಟೋಟ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದೆ.
ದಿನಾಂಕ ಆಗಸ್ಟ್ 03, 2025ರ ಆದಿತ್ಯವಾರ ಬೆಳಗ್ಗೆ 8:30ರಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಮತ್ತು ಕೃಷಿ ಆಶಕ್ತರಿಗೆ 'ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.), ಕಡೇಶಿವಾಲಯ' ಸಂಘಟಕರು ಪ್ರೀತಿಪೂರ್ವಕವಾಗಿ ಆಮಂತ್ರಿಸಿದ್ದಾರೆ.