ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಮರಳು ಮತ್ತು ಕೆಂಪು ಕಲ್ಲು ಅಲಭ್ಯತೆಯಿಂದ ಸಾವಿರಾರು ಕಟ್ಟಡ ಕಾರ್ಮಿಕರು ನಿರುದ್ಯೋಗದಲ್ಲಿ ಮನೆ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವ ಪರಿಣಾಮ ಲಾರಿ ಮಾಲಕರು, ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಜನ ಸಾಮಾನ್ಯರ ಬದುಕು ತೀವ್ರವಾಗಿ ಕುಸಿತದಲ್ಲಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಆ ಪ್ರಯುಕ್ತ, ಜುಲೈ 14ರ ಸೋಮವಾರ ಬೆಳಗ್ಗೆ 10.00ಕ್ಕೆ ಬಿ.ಸಿ ರೋಡಿನಲ್ಲಿ ಪ್ರತಿಭಟನೆ ನಡೆಯಲಿದೆ. ಎಲ್ಲಾ ಕಾರ್ಮಿಕ ಸಂಘಟನೆಗಳು, ಲಾರಿ ಮಾಲಕರ ಸಂಘ, ಸಾರ್ವಜನಿಕರು ಸೇರಿ ಪ್ರತಿಭಟಿಸೋಣ ಎಂದು ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ತಿಳಿಸಿದೆ.