24 July 2025 | Join group

'ಪಾಲೆದ ಕೆತ್ತೆಯ ಕಷಾಯ' ಬೇಕೇ? ನಾಳೆ(ಜುಲೈ 24) ಬಿ.ಸಿ ರೋಡಿಗೆ ಬನ್ನಿ: ಬಂಟ್ವಾಳ ತುಳುಕೂಟದಿಂದ ಆಯೋಜನೆ

  • 23 Jul 2025 04:30:24 PM

ಬಂಟ್ವಾಳ: ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ನಾಳೆ ಜುಲೈ 24 ರಂದು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ ರೋಡ್ ಇದರ ಆಡಳಿತ ಸಮಿತಿಯ ಸಹಕಾರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ "ಪಾಲೆದ ಕೆತ್ತೆದ ಕಷಾಯ" ವಿತರಣೆ ಕಾರ್ಯಕ್ರಮ ನಡೆಯಲಿದೆ.

 

ಬೆಳಿಗ್ಗೆ 6:30 ರಿಂದ 7:30ರ ವರಿಗೆ ನಡೆಯಲಿರುವ ಈ ಪಾಲೆದ ಕೆತ್ತೆದ ಕಷಾಯ ವಿತರಣೆಯಲ್ಲಿ ಸರ್ವ ಭಕ್ತಾದಿಗಳಿಗೆ ಆದರದ ಸ್ವಾಗತವನ್ನು ಅಧ್ಯಕ್ಷರು ಮತ್ತು ಸದಸ್ಯರು ತುಳುಕೂಟ ಬಂಟ್ವಾಳ ಹಾಗೂ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ ರೋಡ್ ಇವರುಗಳು ಕೋರಿದ್ದಾರೆ.

 

ವರ್ಷಕ್ಕೊಮ್ಮೆ ಬರುವ ಈ ಆಟಿ ಅಮಾವಾಸ್ಯೆಯ ಕಾರ್ಯಕ್ರಮ 'ಆರೋಗ್ಯಕ್ಕೆ ಪಾಲೆದ ಕೆತ್ತೆದ ಕಷಾಯ' ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.