ಬಂಟ್ವಾಳ: ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಕಡೇಶಿವಾಲಯ ಗ್ರಾಮದ ಗೆಳೆಯರ ಬಳಗ ಅರಿಕಲ್ಲು ತನ್ನ ತುರ್ತುನಿಧಿ ಯೋಜನೆಯಡಿ ಸಕ್ರೀಯ ಸದಸ್ಯರಾದ ನಾಗೇಶ್ ದೇವಾಡಿಗರಿಗೆ ಆರ್ಥಿಕ ನೆರವು ಒದಗಿಸಿದೆ.
ಇತ್ತೀಚೆಗೆ ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲಿ ಕಾಲು ಗಾಯಗೊಂಡ ನಾಗೇಶ್ ದೇವಾಡಿಗರಿಗೆ ವೈದ್ಯರು ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಳಗದ ತುರ್ತುನಿಧಿಯಿಂದ ರೂ.10,000ರ ಚೆಕ್ ಹಸ್ತಾಂತರಿಸಲಾಯಿತು.
ಗೆಳೆಯರ ಬಳಗ ಅರಿಕಲ್ಲು ಕೈಗೊಂಡ ಈ ಮಾನವೀಯ ಕಾಳಜಿಯ ಹೆಜ್ಜೆ ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಘಟನೆಯ ಏಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕುಟುಂಬದವರು ಧನ್ಯವಾದಗಳನ್ನು ತಿಳಿಸಿದ್ದಾರೆ.