Bantwala, Manihalla : ಮಣಿಹಳ್ಳ ಹಿಂದೂ ಯುವಸೇನೆ ಏಕಲವ್ಯ ಶಾಖೆಯ ವತಿಯಿಂದ 13 ನೇ ವರ್ಷದ ಎಳ್ಳುಗಂಟು ದೀಪೋತ್ಸವವು ಪಣೆಕಲಪಡ್ಪುವಿನಲ್ಲಿ ಜರಗಿತು. ಪುರೋಹಿತರಾದ ರತ್ನಾಕರ್ ಭಟ್ ಸರಪಾಡಿ ನೇತೃತ್ವದಲ್ಲಿ ನಡೆದ ಎಳ್ಳುಗಂಟು ದೀಪೋತ್ಸವದಲ್ಲಿ ಹಿಂದೂ ಮುಖಂಡರುಗಳು ಹಾಗೂ ಹಿಂದೂ ಬಾಂಧವರು ಭಾಗವಹಿಸಿದ್ದರು.
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಭಾಗಿಯಾಗಿ ಎಲ್ಲರಿಗೂ ಶುಭಹಾರೈಸಿದರು. ತಾರಾನಾಥ ಮಣಿ ಪ್ರಸ್ತಾವನೆಗೈದರು. ಹಿಂದೂ ಯುವಸೇನೆ ಕೇಂದ್ರಿಯ ಮಂಡಳಿ ಗೌರವಾಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ ಮಾತನಾಡಿ, ಹಿಂದುತ್ವ ಮತ್ತು ಧರ್ಮ ರಕ್ಷಣೆಯ ಕುರಿತು ಯುವ ಸಮುದಾಯ ಜಾಗೃತರಾಗಬೇಕು ಎಂದು ನುಡಿ ಹೇಳಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಹಿಂದೂ ಯುವ ಸೇನೆ ಗೌರವಾಧ್ಯಕ್ಷ ರಾಮಚಂದ್ರ ಗೌಡ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಹಿಂದೂ ಯುವ ಸೇನಾ ಮಹಿಳಾ ಪ್ರಮುಖ್ ಸುಮಂಗಳಾ, ಮಣಿಹಳ್ಳ ಏಕಲವ್ಯ ಶಾಖೆ ಅಧ್ಯಕ್ಷ ನವೀನ್ ಕುಮಾರ್ ಭಾಗವಹಿಸಿದರು.
ಬಂಟ್ವಾಳ ಪುರಸಭಾ ಸದಸ್ಯೆ ಮೀನಾಕ್ಷಿ ಜಿ. ಗೌಡ, ವಸಂತ ತಂತ್ರಿ ಪಣೆಕಲ, ದಿನೇಶ್ ಪೂಜಾರಿ ಪಣೆಕಲ, ಜಯಪ್ರಕಾಶ್ ಜಕ್ರಿಬೆಟ್ಟು, ಸುಜಾತ ಜಯ ಸಪಲ್ಯ ಕೊಂಗ್ರಬೆಟ್ಟು, ಮುರಳೀಧರ್ ಭಟ್ ಹಳೆಗೇಟು ಮತ್ತಿತರು ಉಪಸ್ಥಿತರಿದ್ದರು.
ಏಳು ಮಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಮತ್ತು ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು. ಹಿಂದೂ ಯುವ ಸೇನೆ ಬಂಟ್ವಾಳ ಘಟಕದ ಅಧ್ಯಕ್ಷ ವಸಂತ್ ಕುಮಾರ್ ವಿ. ಮಣಿಹಳ್ಳ ಸ್ವಾಗತಿಸಿದರು. ಮಣಿಹಳ್ಳ ಉಮೇಶ್ ವಂದಿಸಿದರೆ, ಉಮಾಶಂಕರ್ ನಿರೂಪಿಸಿದರು.