31 August 2025 | Join group

ಬಂಟ್ವಾಳ ಜಕ್ರಿಬೆಟ್ಟಿನಲ್ಲಿ 22ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ – ಸಾಮಾಜಿಕ ಸಾಮರಸ್ಯದ ನಾಡಹಬ್ಬ

  • 26 Aug 2025 10:31:30 PM

ಬಂಟ್ವಾಳ: ಜಕ್ರಿಬೆಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆಯುವ 22ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆಗಸ್ಟ್ 27ರಿಂದ 31ರವರೆಗೆ ನಡೆಯಲಿರುವ ಈ ಉತ್ಸವವು ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಭವ್ಯವಾಗಿ ಜರುಗಲಿದೆ.

 

21 ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಸಾರ್ವಜನಿಕ ಗಣೇಶೋತ್ಸವವು ಇಂದು ಬಂಟ್ವಾಳದ ನಾಡಹಬ್ಬವಾಗಿ ಜನಮನದಲ್ಲಿ ನೆಲೆಯೂರಿದೆ. ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ಸೌಹಾರ್ದದ ಹಬ್ಬವೆಂಬ ಖ್ಯಾತಿ ಪಡೆದಿದೆ.

 

ಈ ಬಾರಿಯೂ ಗಣೇಶೋತ್ಸವದ ಅಂಗವಾಗಿ ವೈಧಿಕ ಪೂಜೆ, ಭಜನಾ, ಹಬ್ಬದ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಯಲಿವೆ.

 

ಉತ್ಸವದ ಅಂತಿಮ ದಿನ ವೈಭವಮಯ ಶೋಭಾಯಾತ್ರೆ ನಡೆಯಲಿದೆ. ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿರುವ ಬಂಟ್ವಾಳದ ಗಣೇಶೋತ್ಸವ, ಈ ಬಾರಿ ಮತ್ತಷ್ಟು ಭವ್ಯತೆಯಿಂದ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

 

ಬಂಟ್ವಾಳ ಜಕ್ರಿಬೆಟ್ಟುವಿನ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರು ಆಗಿರುವ ರಾಜ್ಯದ ಮಾಜಿ ಸಚಿವರು ಆಗಿರುವ ಶ್ರೀ ಬಿ. ರಮಾನಾಥ ರೈ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಬಿ. ಪದ್ಮಶೇಖರ್ ಜೈನ್ ಹಾಗೂ ಎಲ್ಲಾ ಪದಾಧಿಕಾರಿಗಳು, ಸರ್ವಸದಸ್ಯರು, ಉಪ ಸಮಿತಿಗಳು ಮತ್ತು ಮಹಾಪೋಷಕರು ಎಲ್ಲಾ ಸಹೃದಯ ಸಧ್ಭಕ್ತ ಬಂಧುಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.