ಬಂಟ್ವಾಳ: ತಾಲೂಕಿನ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಪ್ರಧಾನ ಮಂತ್ರಿ ಅಯುಷ್ಮಾನ್ ಯೋಜನೆಯಡಿ ನಿರ್ಮಾಣಗೊಂಡಿರುವ "ನಮ್ಮ ಕ್ಲಿನಿಕ್" ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನೈಕ್ ಉಳಿಪಾಡಿಗುತ್ತು ಇಂದು ಉದ್ಘಾಟಿಸಿದರು.
ಉದ್ಘಾಟನೆ ನಡೆಸಿದ ಬಳಿಕ ಮಾತನಾಡಿ "ನಗರ ಪ್ರದೇಶದ ಬಡ ಜನರ ಅರೋಗ್ಯ ಸಂಜೀವಿನಿಯಾಗಿ "ನಮ್ಮ ಕ್ಲಿನಿಕ್" ಸೇವೆಯನ್ನು ನೀಡಲಿದೆ. 40 ವರ್ಷ ದಾಟಿದ ಎರಡು ತಿಂಗಳಿಗೊಮ್ಮೆ ಅರೋಗ್ಯ ತಪಾಸಣೆ ಮಾಡಿದರೆ ಉತ್ತಮ. ನಗರ ಭಾಗದ ಜನರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಪುರುಷೋತ್ತಮ, ಕ್ಲಿನಿಕ್ ಸಿಬ್ಬಂದಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.