ಬಂಟ್ವಾಳ, ಕಡೇಶಿವಾಲಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ 'ವಿಶ್ವ ರೇಬಿಸ್ ದಿನಾಚರಣೆ' ಪ್ರಯುಕ್ತ ಕಡೇಶ್ವಾಲ್ಯ ಗ್ರಾಮದಲ್ಲಿ 'ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ' ಉಚಿತ ಲಸಿಕಾ ಕಾರ್ಯಕ್ರಮ ದಿನಾಂಕ 07ನೇ ಸೆಪ್ಟೆಂಬರ್ 2025 ಭಾನುವಾರ ನಡೆಯಲಿದೆ.
ಒಟ್ಟು ಮೂರು ತಂಡಗಳಿಂದ ಈ ಶಿಬಿರ ನಡೆಯಲಿದ್ದು, ಈ ಕೆಳಗೆ ಲಗತ್ತಿಸಿದ ಮನವಿಯಲ್ಲಿ ಸಮಯ ಮತ್ತು ತಂಡದ ವಿವರ ನಮೂದಿಸಲಾಗಿದೆ.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕಿಸಿ ಗ್ರಾಮದಿಂದ ಹುಚ್ಚುನಾಯಿ ರೋಗವನ್ನು ನಿರ್ಮೂಲನೆ ಮಾಡಲು ಸಹಕರಿಸಬೇಕಾಗಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಮುಖ್ಯ ಪಶುವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪಶು ಆಸ್ಪತ್ರೆ ಮಾಣಿ ಇವರುಗಳು ವಿನಂತಿ ಮಾಡಿಕೊಂಡಿದ್ದಾರೆ.