ಬಂಟ್ವಾಳ, ಕಡೇಶಿವಾಲಯ: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಸಮುದಾಯದ ದಳ ಕಡೇಶಿವಾಲಯ, ಜಿ.ವಿ. ಫ್ರೆಂಡ್ಸ್ ಕಡೇಶಿವಾಲಯ, ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಕುಂಟಿಕಾನ–ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆಪ್ಟೆಂಬರ್ 14ನೇ ಭಾನುವಾರ ದ.ಕ. ಜಿ.ಪಂ. ಪ್ರಾಥಮಿಕ ಶಾಲೆ, ಪೆರ್ಲಾಪು, ಕಡೇಶಿವಾಲಯದಲ್ಲಿ ಜರಗಿತು.
ಈ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಮೂಳೆ ತಜ್ಞರಿಂದ ಸಲಹೆ, ಗರ್ಭಕೋಷದ ಕ್ಯಾನ್ಸರ್ ತಪಾಸಣೆ, ಸಾಮಾನ್ಯ ರೋಗ ತಜ್ಞರ ಸಲಹೆ ಪರೀಕ್ಷೆಯನ್ನು ನಡೆಸಲಾಯಿತು. ರಕ್ತ ದಾನಿಗಳಿಗೆ ಪ್ರಮಾಣಪತ್ರ ನೀಡುವ ಮೂಲಕ ಗೌರವಿಸಲಾಯಿತು.
60 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. 200 ಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ನಡೆಯಿತು. ಹೃದಯ, ಮೂಳೆ ಮತ್ತು ಇತರ ಎಲ್ಲ ರೀತಿಯ ತಪಾಸಣೆಗಳಿಗೂ ಗ್ರಾಮಸ್ಥರು ಸದುಪಯೋಗ ಪಡೆದರು. ಸಹಕರಿಸಿದ ಗ್ರಾಮಸ್ಥರು ಮತ್ತು ಊರ ಪರವೂರ ಗತಿಗಣ್ಯರಿಗೆ ಧನ್ಯವಾದಗಳನ್ನು ಪ್ರಾಯೋಜಕರು ಸಲ್ಲಿಸಿದ್ದಾರೆ.