ಬ್ರಿಟನ್: ದಿನಾಂಕ 13-09-2025 ರಂದು ಕೊವೆಂಟ್ರಿಯ ಹಾಲಿಡೇ ಇನ್ ಎಕ್ಸ್ಪ್ರೆಸ್ ಹೋಟೆಲಿನಲ್ಲಿ ಬಿಲ್ಲವ ಬಳಗದ ಉದ್ಘಾಟನೆಗೊಂಡಿದೆ. ಬ್ರಿಟನ್ ಬಿಲ್ಲವ ಬಳಗದ ಸ್ಥಾಪಕಾಧ್ಯಕ್ಷರಾದ ಡಾ. ಪಿ.ಕೆ ಮನೋಜ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಶ್ರೀ ಗುರು ಚಾರಿಟಿಯ ಟ್ರಸ್ಟಿ ಮತ್ತು ಮಂಗಳೂರು ಮಲಾವಿ ಎಸೋಸಿಯೇಶನಿನ ಸಂದೇಶ್ ವಿವೇಕಾನಂದ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಇದರಲ್ಲಿ 150 ಕುಟುಂಬಗಳ ಸದಸ್ಯರು ಒಳಗೊಂಡಿದ್ದು, ಕಾರ್ಯದರ್ಶಿಯಾಗಿ ಲೀನಾ ಕೋಟ್ಯಾನ್, ಖಜಾಂಜಿಯಾಗಿ ಧೀರಜ್ ಅಂಚನ್ ರವರು ಆಯ್ಕೆಯಾಗಿರುತ್ತಾರೆ.