ವಿಟ್ಲ: ಹಿಂದೂ ಜಾಗರಣ ವೇದಿಕೆ, ವಿಟ್ಲ ತಾಲೂಕು ವತಿಯಿಂದ ಫೆಬ್ರವರಿ 23, 2025 ರಂದು ಬೃಹತ್ ಹಿಂದೂ ಸಮಾವೇಶ.

  • 18 Feb 2025 10:20:48 AM

Vittla : ಹಿಂದೂ ಜಾಗರಣ ವೇದಿಕೆ, ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನದ ಪ್ರಯುಕ್ತ ಹಿಂದೂ ಯುವ ಸಮಾವೇಶ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇದೇ ಬರುವ ಫೆಬ್ರವರಿ 23, 2025 ರಂದು ನಡೆಯಲಿದೆ.

 

ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಹಿಂದೂ ಜಾಗರಣ ವೇದಿಕೆ ಈ ಭವ್ಯ ಸಮಾವೇಶವನ್ನು ಹಮ್ಮಿಕೊಂಡಿದೆ. ಸಮಾವೇಶದ ಸಲುವಾಗಿ ಮಧ್ಯಾಹ್ನ 3.00ಕ್ಕೆ ಜೈನ ಬಸದಿಯಿಂದ ಶ್ರೀ ಪಂಚಲಿಗೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆಯನ್ನು ನಡೆಸಿ, ನಂತರ 3.30ಕ್ಕೆ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

 

ಈ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಕರರಾಗಿ ಶ್ರೀ ಕೇಶವ ಬಂಗೇರ, ವಿಭಾಗ ಪ್ರಮುಖ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಾತನಾಡಲಿದ್ದಾರೆ. ಪ್ರಮುಖ ಹಿಂದೂ ಮುಖಂಡರು ಕೂಡ ಭಾಗವಹಿಸಲಿದ್ದಾರೆ.

 

ಹಿಂದೂ ಜಾಗರಣ ವೇದಿಕೆ, ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕರು ಮತ್ತು ಸರ್ವ ಸದಸ್ಯರು ಸಮಸ್ತ ಹಿಂದೂಗಳಿಗೆ ಅಹ್ವಾನ ನೀಡುವುದರ ಮುಖಾಂತರ, ತಾವು ಮನೆಮಂದಿಯೊಂದಿಗೆ ಬನ್ನಿ, ತಮ್ಮವರನ್ನು ಕರೆತನ್ನಿ ಎಂದು ಹೇಳುವ ಮೂಲಕ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖೇನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.