31 January 2026 | Join group

ಬಂಟ್ವಾಳದ ಕಡೇಶಿವಾಲಯ ಗ್ರಾಮ ಪಂಚಾಯತ್ ನಲ್ಲಿ 2025-26 ರ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ

  • 07 Oct 2025 12:10:26 AM

ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮ ಪಂಚಾಯತ್ ನಲ್ಲಿ ನಿನ್ನೆ ದಿನಾಂಕ 06-10-2025, ಸೋಮವಾರ 2025-26 ರ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ನಡೆಯಿತು.

 

ಸಭೆಗೆ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್. ರಾವ್, ಉಪಾಧ್ಯಕ್ಷರು ಸುರೇಶ್ ಪೂಜಾರಿ ಕನ್ನೊಟ್ಟು ಮತ್ತು ಇತರ ಸದಸ್ಯರುಗಳ ನೇತೃತ್ವದಲ್ಲಿ ಸಭೆ ನಡೆಯಿತು.

 

ಪಂಚಾಯತ್ ಪಿಡಿಓ ಸುನಿಲ್ ಕುಮಾರ್ ರವರು ಸ್ವಾಗತಿಸಿ ವಂದಿಸಿದರು. ಪಂಚಾಯತ್ ಕಾರ್ಯದರ್ಶಿ ಚಂದಪ್ಪ ನಾಯ್ಕ ಅವರು ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಮನವಿ ಮೂಲಕ ಸಲ್ಲಿಸಿದರು.

 

ಗ್ರಾಮಸಭೆಯ ನೋಡಲ್ ಅಧಿಕಾರಿ ಪ್ರದೀಪ್ ಡಿ. ಸೋಜಾ (ತೋಟಗಾರಿಕಾ ಇಲಾಖೆ, ಬಂಟ್ವಾಳ) ಉಪಸ್ಥಿತರಿದ್ದರು.