Kadeshivalaya : ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ದಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸಮೂಹ ಸಂಪನ್ಮೂಲಗಳ ಕೇಂದ್ರ, ಕಡೇಶಿವಾಲಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯ ಇದರ ಆಶ್ರಯದಲ್ಲಿ ನಾಳೆ ತಾರೀಕು 20 ಫೆಬ್ರವರಿ 2025 ರಂದು ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಲಿದೆ.
ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ( Foundation Literacy and Numeracy ) ವನ್ನು ಕೇಂದ್ರವಾಗಿರಿಸಿಕೊಂಡು ಕಡೇಶಿವಾಲಯ ಕ್ಲಸ್ಟರ್ ಗೆ ಸೇರಿದ ಐದು ಸರಕಾರಿ ಶಾಲೆಗಳಿಗೆ ಸೇರಿದ ಮಕ್ಕಳಿಗೆ ಈ ಕಲಿಕಾ ಹಬ್ಬ ನಡೆಯಲಿದೆ. ಈ ಕಲಿಕಾ ಹಬ್ಬ ಕಾರ್ಯಕ್ರಮ ಕಡೇಶಿವಾಲಯ, ಕೆಮ್ಮಾನು ಪಲ್ಕೆ, ಶೇರಾ, ಬರಿಮಾರು ಮತ್ತು ಪೆರಾಜೆ ಶಾಲೆಯ FLN ಆಧಾರಿತ 1 ರಿಂದ 5 ನೇ ತರಗತಿಯ ಮಕ್ಕಳು ಮತ್ತು ಅಧ್ಯಾಪಕ ವೃಂದದ ಸಮ್ಮಿಲನದಲ್ಲಿ ನಡೆಯಲಿದೆ.
ಪ್ರತಿಯೊಂದು ಶಾಲೆಗಳಿಂದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಅಗತ್ಯವಿರುವ ಮಕ್ಕಳನ್ನು ಕರೆಸಿ, ಅವರಿಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚಟುವಟಿಗೆಳನ್ನು ಮಾಡುವುದರ ಮೂಲಕ ಕಲಿಕಾ ಹಬ್ಬ ನಡೆಯಲಿದೆ. ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿ ಅವರಿಗೆ ಕಥೆ ಹೇಳುವುದು, ಕೈ ಬರಹ, ಸಂತೋಷದಾಯಕ ಗಣಿತ , ಗಟ್ಟಿ ಓದು, ವಿದ್ಯಾರ್ಥಿ ಮತ್ತು ಪೋಷಕರ ಸಹ ಸಂಬಂಧದೊಂದಿಗೆ ಕಥೆ ಕಟ್ಟುವುದು, ರಸಪ್ರಶ್ನೆ ಮುಂತಾದ ಹಲವು ಬಗೆಯ ಚಟುವಟಿಕೆಗಳನ್ನು ನಡೆಸಲಾಗುವುದು. ಮಕ್ಕಳಿಗೆ ಬಹುಮಾನ ನೀಡುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವೇ ಕಲಿಕಾ ಹಬ್ಬ. ಈ ಕಾರ್ಯಕ್ರಮ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ತರುವಲ್ಲಿ ಸಹಕಾರಿಯಾಗಲಿದೆ ಎಂದು ಶಾಲಾ ಶಿಕ್ಷಕರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕಲಿಕಾ ಹಬ್ಬದ ಸಂಭ್ರಮ ಕಡೇಶಿವಾಲಯದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ. ಈಗಾಗಲೇ ಸಭಾಮಂಟಪ ಮತ್ತು ಇನ್ನಿತರ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗಿದ್ದು, ನಾಳೆ ಬೆಳಿಗ್ಗೆ 9.30 ರಂದು ನರವೇರಲಿದೆ. ಸರ್ವರಿಗೂ ಆದರದ ಸ್ವಾಗತದೊಂದಿಗೆ ಬರಮಾಡಿಕೊಳ್ಳುತ್ತಿದ್ದಾರೆ ಈ ಎಲ್ಲಾ 5 ಶಾಲೆಗಳ ಮುಖ್ಯೋಪಾಧ್ಯಾಯರುಗಳು ಮತ್ತು ಶಿಕ್ಷಣ ವೃಂದ.