22 October 2025 | Join group

ನಾಳೆ (ಅ.19) ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ 'ಮಾತೃಶ್ರೀ ಆಶ್ರಯ' ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

  • 18 Oct 2025 06:10:50 PM

ಕಲ್ಲಡ್ಕ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ 'ಮಾತೃಶ್ರೀ ಗೆಳೆಯರ ಬಳಗ ವೀರಕಂಭ' ಸಂಘಟನೆ ಪ್ರಾರಂಭವಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ವೀರಕಂಭ ಗ್ರಾಮದ ಅನಂತಾಡಿ ಕ್ರಾಸ್ ರಸ್ತೆಯ ಬಳಿ ನೂತನವಾಗಿ "ಮಾತೃಶ್ರೀ ಆಶ್ರಯ" ಎಂಬ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ಅದರ ಲೋಕಾರ್ಪಣ ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಾಸಕ ಶ್ರೀ ರಾಜೇಶ್ ನಾಯಕ್ ಅಕ್ಟೋಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ಮಾಡಲಿರುವರು.

 

ಈ ಸಂದರ್ಭದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರಾದ ದಿನೇಶ್ ಪೂಜಾರಿ, ಸಂದೀಪ್ ಕೆಲಿಂಜ, ಪಿ ಡಬ್ಲ್ಯೂ ಕಂಟ್ರಾಕ್ಟರ್ ಪದ್ಮನಾಭ ಗೌಡ ಮೈರ, ಶ್ರೀ ಗಿಲ್ಕಿಂಜತಾಯಿ ಉತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು ಮೊದಲಾದವರು ಉಪಸ್ಥಿತಿಯಲ್ಲಿರುವರು ಎಂದು ಮಾತೃಶ್ರೀ ಗೆಳೆಯರ ಬಳಗ ವೀರಕಂಭದ ಅಧ್ಯಕ್ಷ ರಮೇಶ್ ಗೌಡ ಮೈರಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.