ಕಲ್ಲಡ್ಕ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ ಅಂತರ್ ಕಾಲೇಜು ಪಿಯು ಫೆಸ್ಟ್ ಉತ್ಕರ್ಷ 2025 ಅ. 25 ರಂದು ಅಜಾದ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಮಂಗಳೂರು ಕಾನೂನು ಸಲಹೆಗಾರ ಲೋಟಸ್ ಪ್ರಾಪರ್ಟೀಸ್ ಲತೀಶ್ ಶೆಟ್ಟಿ ಮಂಗಳೂರು ಉದ್ಘಾಟಿಸಲಿದ್ದಾರೆ. ಶ್ರೀ ರಾಮ ವಿದ್ಯಾ ಕೇಂದ್ರ ಸಂಚಾಲಕರಾದ ಶ್ರೀ ವಸಂತ ಮಾಧವ, ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಗೌರವ ಉಪಸ್ಥಿತಿಯಲ್ಲಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ನಾರಾಯಣಶೆಟ್ಟಿ ಕುಲ್ಯಾರ್, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮ್ಯಾನೇಜರ್ ಗೋಪಾಲಕೃಷ್ಣ ಪ್ರಭು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ್ ಪ್ರಭು ಸಿದ್ದಕಟ್ಟೆ, ಭಾ.ಜ. ಪ ಯುವ ಮುಖಂಡರಾದ ವಿಕಾಸ್ ಕುಮಾರ್ ಪುತ್ತೂರು, ಹೋಟೆಲ್ ಸಮುದ್ರ ಮಾಲಕರಾದ ಕರುಣಾಕರ ಶೆಟ್ಟಿ, ಶ್ರೀರಾಮ ವಿದ್ಯಾ ಕೇಂದ್ರ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೃಷ್ಣಪ್ರಸಾದ್ ಕೆ ಎನ್, ಶ್ರೀರಾಮ ಪದವಿ ವಿಭಾಗ ಉಪ ಪ್ರಾಂಶುಪಾಲ ಯತಿರಾಜ್ ಪಿ ಭಾಗವಹಿಸಲಿದ್ದಾರೆ.





