18 March 2026
sudhavanikannada@gmail.com

ಯುದ್ಧದ 18ನೇ ದಿನ: ಯುಎಇಯಲ್ಲಿ ಯುಎಇಯಲ್ಲಿ ಇಲ್ಲಿಯವರೆಗೆ 8 ಮಂದಿ ಸಾವು, 157 ಮಂದಿಗೆ ಗಾಯ

  • 17 Mar 2026 07:26:53 PM

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ನಡೆಯುತ್ತಿರುವ ಯುದ್ಧ 18ನೇ ದಿನಕ್ಕೆ ಕಾಲಿಟ್ಟಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲೂ ಸಾವು ನೋವು ಸಂಭವಿಸಿದೆ.

 

ಫೆಬ್ರವರಿ 28ರಿಂದ ಆರಂಭವಾದ ದಾಳಿಗಳಲ್ಲಿ ಇದುವರೆಗೆ ಒಟ್ಟು 8 ಮಂದಿ ಮೃತಪಟ್ಟಿದ್ದು, 157 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಸಾಮಾನ್ಯ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ.

 

ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು, ಹಾಗು ಅವುಗಳನ್ನು ತಡೆಹಿಡಿದಾಗ ಬಿದ್ದ ಅವಶೇಷಗಳಿಂದಾಗಿ ವಿವಿಧ ಎಮಿರೇಟ್ಸ್ ಪ್ರದೇಶಗಳಲ್ಲಿ ಗಾಯಗಳ ಪ್ರಕರಣಗಳು ದಾಖಲಾಗಿವೆ. ಬಹುತೇಕ ದಾಳಿಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆದರೂ, ಕೆಲವು ಕ್ಷಿಪಣಿಗಳು ವಾಸಸ್ಥಳ ಪ್ರದೇಶಗಳಿಗೆ ತಲುಪಿದ್ದು, ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ.

 

ವಿಶೇಷವಾಗಿ ಅಬುಧಾಬಿ ಮತ್ತು ದುಬೈ ನಗರಗಳಲ್ಲಿ ಹಾನಿ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಇರಾನ್ ಹಾಗೂ ಅದರ ಸಂಬಂಧಿತ ಪ್ರಾದೇಶಿಕ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ದಾಳಿಗಳು ನಡೆಯುತ್ತಿದ್ದು, ಯುಎಇ ಸರ್ಕಾರವು ದಾಳಿಗಳನ್ನು ತೀವ್ರವಾಗಿ ಖಂಡಿಸಿದೆ. ದೇಶದ ಭದ್ರತೆ ಮತ್ತು ನಿವಾಸಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

 

ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಲು ಮನವಿ ಮಾಡಲಾಗಿದೆ.