ದಾಖಲೆ ಸೃಷ್ಟಿಸಿದ ‘ಧುರಂಧರ್-2’; 1000 ಕೋಟಿ ಕ್ಲಬ್ ಸೇರಿದ ಮೂರನೇ ಚಿತ್ರ, ಕಲೆಕ್ಷನ್ ನಲ್ಲಿ ನಂಬರ್ 1

  • 08 Apr 2026 12:49:03 AM

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧೂರಧರ್ 2 ಚಿತ್ರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ರೂ. 1000 ಕೋಟಿ ರೂಪಾಯಿ ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ರೂ. 1600 ಕೋಟಿಗಿಂತಲೂ ಹೆಚ್ಚಿನ ಗಡಿ ದಾಟಿದೆ.

 

ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳ ಸಮನ್ವಯದಿಂದ ಚಿತ್ರಮಂದಿರಗಳಲ್ಲಿ ಭಾರಿ ಓಟ ಕಾಣುತ್ತಿದೆ. ಮೊದಲ ವಾರದಲ್ಲೇ ಉತ್ತಮ ಕಲೆಕ್ಷನ್ ಗಳಿಸಿದ ಚಿತ್ರ, ಎರಡನೇ ವಾರದಲ್ಲೂ ತನ್ನ ವೇಗವನ್ನು ಮುಂದುವರಿಸಿಕೊಂಡಿದೆ.

 

ಚಿತ್ರದ ಯಶಸ್ಸಿನೊಂದಿಗೆ ದೇಶಿಯ ಲೆಕ್ಕಾಚಾರದಲ್ಲಿ ‘ಧುರಂಧರ್-2’ 1000 ಕೋಟಿ ಕ್ಲಬ್ ಸೇರಿದ್ದು, ಈ ಸಾಧನೆ ಮಾಡಿರುವ ಪ್ರಮುಖ ಹಿಂದಿ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಚಿತ್ರತಂಡ ಈ ಸಾಧನೆಯನ್ನು ಸಂಭ್ರಮದಿಂದ ಆಚರಿಸಿದೆ.

 

ಚಿತ್ರದ ನಿರ್ದೇಶನ, ಹಿನ್ನೆಲೆ ಸಂಗೀತ ಮತ್ತು ರಣವೀರ್ ಸಿಂಗ್ ಅವರ ಅಭಿನಯಕ್ಕೆ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರ ಇನ್ನಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಈ ಮೊದಲು 2025 ರಲ್ಲಿ ರಿಲೀಸ್ ಆಗಿದ್ದ 'ಧುರಂಧರ್' ಸಿನಿಮಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು.